ಸಬ್ಸಿಡಿಯುಳ್ಳ ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಲಾಗಿದೆ. ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯಲ್ಲಿ 4 ರೂ. ಏರಿಕೆಯಾಗಿದೆ. ಸಬ್ಸಿಡಿರಹಿತ ಸಿಲಿಂಡರ್ ಬೆಲೆಯಲ್ಲಿ 93.94 ರೂ. ಏರಿಕೆಯಾಗಿದೆ. ಸಬ್ಸಿಡಿಯುಳ್ಳ ಗೃಹ ಬಳಕೆ 14.2 ಕೆ.ಜಿ. ಸಿಲಿಂಡರ್ ಬೆಲೆ ದೆಹಲಿಯಲ್ಲಿ 495.69 ರೂ., ಕೋಲ್ಕತ್ತದಲ್ಲಿ 498.43 ರೂ., ಮುಂಬೈನಲ್ಲಿ 498.38 ರೂ., ಚೆನ್ನೈನಲ್ಲಿ 483.69 ರೂ. ಆಗಿದೆ. ಬೆಂಗಳೂರು ಬೆಲೆ 530 ರು ನಷ್ಟಿದೆ...ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಮೆಟ್ರೋ ನಗರಗಳಲ್ಲಿ 93 ರೂ. ನಿಂದ 94 ರೂ. ಏರಿಕೆಯಾಗಲಿವೆ. ದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್.ಪಿ.ಜಿ. ಸಿಲಿಂಡರ್ ಬೆಲೆ 742 ರೂ., ಕೋಲ್ಕತ್ತದಲ್ಲಿ 759.5 ರೂ. ಮುಂಬೈನಲ್ಲಿ 718.5 ರೂ., ಚೆನ್ನೈನಲ್ಲಿ 750 ರೂ. ಆಗಲಿದೆ. ಉದಾಹರಣೆಗೆ ಅರ್ಹ ಗ್ರಾಹಕರಿಗೆ ಸದ್ಯದ ವ್ಯವಸ್ಥೆಯಲ್ಲಿ 119.85 ರೂ. ಸಬ್ಸಿಡಿ ಮೊತ್ತ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿತ್ತು. ಹೊಸ ಅಧಿಸೂಚನೆಯ ಪ್ರಕಾರ ಬ್ಯಾಂಕ್ ಖಾತೆಗೆ 107 ರೂ. ಸಬ್ಸಿಡಿ ಮೊತ್ತ ಜಮೆಯಾಗಲಿದೆ. ಜಿಎಸ್ ಟಿ ಹಾಗು ಸಬ್ಸಿಡಿ ಕಡಿತದಿಂದ ಪ್ರತಿ ಸಿಲಿಂಡರ್ ಬೆಲೆ 32 ರೂ. ಹೆಚ್ಚಾಗಲಿದೆ.
The price of subsidized LPG (cooking gas) was hiked by Rs 4.50 per cylinder and Price of non-subsidised LPG hiked by Rs 93. Price of aviation fuel (ATF) was also hiked by 2 per cent on climbing international crude prices